Thursday, April 03, 2014

Prohibited Area - Kolar

ಕೋಲಾರ ತಾಲೂಕು ಅರಾಬಿಕೊತ್ತನೂರು ಗ್ರಾಮವು ಬೆಟ್ಟ ಗುಡ್ಡಗಳಿಂದ ಕೂಡಿದ ಪ್ರದೇಶವಾಗಿರುತ್ತದೆ. ಈ ಕಾರಣದಿಂದ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣದ ಸಲುವಾಗಿ ಗ್ರಾಮದ ಬಳಿಯ ಬೆಟ್ಟವನ್ನು ಕೊರೆದು ಜಲ್ಲಿ ತಯಾರಿಕೆಗಾಗಿ ಉಪಯೋಗಿಸಿಕೊಂಡಿರುತ್ತಾರೆ. ಇದರ ಪರಿಣಾಮವಾಗಿ ಬೆಟ್ಟದ ಪ್ರದೇಶದಲ್ಲಿ ಒಂದು ಕೊಳದ ರೀತಿಯ ಹೊಂಡ ನಿರ್ಮಿತವಾಗಿರುತ್ತದೆ. ಇದನ್ನು ನಾಗರೀಕರು ಮತ್ತು ಯುವಕರು ಪ್ರವಾಸಿತಾಣವನ್ನಾಗಿಸಿಕೊಂಡು ಈ ಪ್ರದೇಶದಲ್ಲಿ ಈಜಾಟ ಹಾಗೂ ಇತರೇ ಮೋಜುಮಸ್ತಿಯನ್ನು ನಡೆಸುತ್ತಿರುತ್ತಾರೆ. ಈ ಹೊಂಡವು ಅತ್ಯಂತ ಆಲವಾಗಿದ್ದು ಅತೀ ಚೂಪಾದ ಕಲ್ಲುಗಳಿಂದ ಕೂಡಿದ ಅಪಾಯಕಾರಿ ಸ್ಥಳವಾಗಿರುತ್ತದೆ. ಇದುವರೆಗೂ ನಾಲ್ಕು ಅಸ್ವಾಭಾವಿಕ ಮರಣ ಪ್ರಕರಣಗಳು ಇಲ್ಲಿ ಸಂಭವಿಸಿರುತ್ತವೆ. ಸಾರ್ವಜನಿಕ ಹಿತದೃಷ್ಠಿಯಿಂದ ದಿನಾಂಕ ೨೨-೦೩-೨೦೧೪ ರಂದು ಜಿಲ್ಲಾಡಳಿತವು ಈ ಪ್ರದೇಶವನ್ನೊಳಗೊಂಡಂತೆ ಸುಮಾರು ೨೦೦ ಮೀಟರ್‍ಗಳ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವನ್ನಾಗಿ ಘೋಷಿಸಿ ಆದೇಶ ಹೊರಡಿಸಲಾಗಿರುತ್ತದೆ.
ಜಿಲ್ಲಾ ದಂಡಾಧಿಕಾರಿಗಳು ಈ ಪ್ರದೇಶವನ್ನು ೧೪೪ ಸಿ.ಆರ್‍.ಪಿ.ಸಿ ರೀತ್ಯ ನಿಷೇಧಿತ ಪ್ರದೇಶ ವನ್ನಾಗಿ ಘೋಷಿಸಿ ಆದೇಶಿಸಿರುತ್ತಾರೆ. ಇದನ್ನು ಉಲ್ಲಂಘಿಸಿದವರ ವಿರುದ್ದ ಕಲಂ ೧೮೮ ಐ.ಪಿ.ಸಿ ರೀತ್ಯ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.
ಈ ಪ್ರದೇಶಕ್ಕೆ ಹೋಗುವಂತೆ ಒತ್ತಾಯಿಸುವ ಅಥವಾ ಪ್ರೋತ್ಸಾಹಿಸುವವರ ವಿರುದ್ದ ಸಹಾ ಕಲಂ ೩೦೬ ಐ.ಪಿ.ಸಿ (ಆತ್ಮಹತ್ಯೆಗೆ ಪ್ರೇರೇಪಿಸುವುದು) ರೀತ್ಯ  ಪ್ರಕರಣ ದಾಖಲಿಸಿ ಬಂಧಿಸಲಾಗುವುದು. ಆದ್ದರಿಂದ ಸಾರ್ವಜನಿಕರು ಅದರಲ್ಲಿಯೂ ಪ್ರಮುಖವಾಗಿ ಯುವಕರು ಈ ನಿಷೇಧಿತ ವಲಯಕ್ಕೆ ತೆರಳದಂತೆ ತಿಳಿಸಲಾಗಿದೆ.
ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ಹಾಗೂ ಇತರರಿಗೆ ತಿಳಿಸುವಂತೆ ಕೋರಲಾಗಿದೆ

No comments:

Post a Comment

RR Nagara Police