Saturday, June 21, 2014

Tumkur District : Kyatsandra Police

vÀĪÀÄPÀÆgÀÄ PÁåvÀìAzÀæ ¥ÉưøÀjAzÀ a£ÀßzÀ MqÀªÉ PÀ¼Àî£À §AzsÀ£À
ದಿ:19.06.13 ರಂದು ಬೆಳಗ್ಗೆ 9 ಗಂಟೆಯಲ್ಲಿ ಪಿರ್ಯಾದಿ ಶಾರದಮ್ಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆದಿ:17/06/14 ರಂದು ಮಧ್ಯಾಹ್ನ 12:30 ಗಂಟೆಯಲ್ಲಿ ನಮ್ಮ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ದನಗಳನ್ನು ಕಟ್ಟಿ ಬರಲು ಹೋಗಿದ್ದುಈ ದಿನ ಮದ್ಯಾಹ್ನ ನಮ್ಮ ಮನೆಗೆ ಬಂದು ನೋಡಲಾಗಿಹಾಡುಹಗಲೇ ಮನೆಯ ಬೀಗವನ್ನು ಹೊಡೆದು,ಮನೆಯಲ್ಲಿಟ್ಟಿದ್ದ ಸುಮಾರು 70 ಗ್ರಾಂ ತೂಕದ ಚಿನ್ನದ ವಡವೆಗಳ ಒಟ್ಟು ಮೌಲ್ಯ ರೂ.2,00,000=00 ಆಗಿದ್ದುಈ ವಡವೆಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂತ ಇತ್ಯಾದಿಯಾಗಿ ನೀಡಿದ ದೂರಿನಂತೆ ಕ್ಯಾತ್ಸಂದ್ರ ಪೊಲೀಸ್ ಠಾಣಾ ಮೊ.ನಂ.216/2014 ಕಲಂ 454,380 ಐ.ಪಿ.ಸಿ. ರೀತ್ಯ ಪ್ರಕರಣ ದಾಖಲಾಗಿರುತ್ತದೆ.
   ಪ್ರಕರಣ ದಾಖಲಾದ 12 ಗಂಟೆಗಳಲ್ಲೇ ಜಿಲ್ಲಾ ವರಿಷ್ಠಾಧಿಕಾರಿಯವರಾದ ಶ್ರೀ ರಮಣ್ ಗುಪ್ತಐ.ಪಿ.ಎಸ್. ಜಿಲ್ಲಾ ಹೆಚ್ಚುವರಿ ವರಿಷ್ಠಾಧಿಕಾರಿಯಾದ ಶ್ರೀ ಆರ್. ಲಕ್ಷ್ಮಣ್ತುಮಕೂರು ನಗರ ಉಪ ವಿಭಾಗದ ಡಿ.ಎಸ್.ಪಿ. ಶ್ರೀ ಎಲ್. ಜಗದೀಶರವರ ಮಾರ್ಗದರ್ಶನದಲ್ಲಿ ಕ್ಯಾತ್ಸಂದ್ರ ವೃತ್ತ ನಿರೀಕ್ಷಕರಾದ ಸಿ.ಪಿ.ಐ. ಕೆ.ಸಿ. ಗಿರಿ ಮತ್ತು ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಚನ್ನಯ್ಯ ಎಸ್. ಹಿರೇಮಠ್ ಮತ್ತು ಸಿಬ್ಬಂದಿಯವರ ನೇತೃತ್ವದಲ್ಲಿ ಕೃಷ್ಣ ಕೃಷ್ಣಮೂರ್ತಿ ಬಿನ್ ಗಂಗರಾಜು, 22 ವರ್ಷವಕ್ಕಲಿಗರುಅರೆಗುಜ್ಜನಹಳ್ಳಿ ತುಮಕೂರು ತಾ||ಈತನನ್ನು ಬಂಧಿಸಿ ಸುದೀರ್ಘ ವಿಚಾರಣೆ ಮಾಡಿ ಕಳವು ಮಾಡಿದ ಆಭರಣಗಳನ್ನು ಮನೆಯ ಹಿತ್ತಲಿನಲ್ಲಿ ಹುದುಗಿಸಿದ್ದ 1)ಸು.20 ಗ್ರಾಂ ತೂಕದ ಒಂದು ಚಿನ್ನದ ಕೈಚೈನು, 2) ಸು.12 ಗ್ರಾಂ ತೂಕದ ಚಿನ್ನದ ಒಂದು ಉಂಗುರ, 3) ಸುಮಾರು 8 ಗ್ರಾಂ ತೂಕದ ಒಂದು ಜೊತೆ ಪ್ಲೈನ್ ಓಲೆ ಮತ್ತು ಕೆನ್ನೆ ಚೈನ್, 4) 18 ಗ್ರಾಂ ನ ಒಂದು ಬಂಗಾರದ ಕೊರಳ ಚೈನ್ 5) ಒಂದು ಚಿನ್ನದ ಕೆಂಪು ಕಲ್ಲಿನ 5 ಗ್ರಾಂ ನ ಉಂಗುರ, 6) ಸುಮಾರು 5 ಗ್ರಾಂ ತೂಕದ ಕೆಂಪು ಕಲ್ಲಿನ ಒಂದು ಜೊತೆ ಚಿನ್ನದ ಓಲೆ ಈ ಆಭರಣಗಳನ್ನು ವಶಪಡಿಸಿಕೊಂಡಿರುತ್ತದೆ.

No comments:

Post a Comment

Bantwala Rural Police