ಹಾವೇರಿ ಜಿಲ್ಲೆಯಲ್ಲಿ ಏಳು ಸಾಂತ್ವನ ಕೇಂದ್ರ
ಹಾವೇರಿ ಜಿಲ್ಲೆಯಲ್ಲಿ ಸಾಂತ್ವನ ಯೋಜನೆಯಡಿ ಕಳೆದ ಸಾಲಿನಲ್ಲಿ 1336 ಪ್ರಕರಣಗಳು ದಾಖಲಾಗಿದ್ದು, 1248 ಪ್ರಕರಣಗಳನ್ನು ಸಮಾಲೋಚನೆ ಮುಖಾಂತರ ಇತ್ಯರ್ಥಗೊಳಿಸಲಾಗಿದೆಯೆಂದು ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಬಿ.ಆಂಜನಪ್ಪ ಅವರು ತಿಳಿಸಿದರು.
ಅವರು ಜೂನ್ 10, 2014 ರಂದು ಜರುಗಿದ ಸಾಂತ್ವನ ಯೋಜನೆಯ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಂತ್ವನ ಯೋಜನೆಯಡಿ ಮಹಿಳೆಯರ ಕೌಟುಂಬಿಕ, ಸಾಮಾಜಿಕ, ಮಾನಸಿಕ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ದೌರ್ಜನ್ಯಕ್ಕೆ ಒಳಪಟ್ಟ ಮಹಿಳೆಯರಿಗೆ ಕಾನೂನು ಸಲಹೆ, ಆರ್ಥಿಕ ಪರಿಹಾರ, ತಾತ್ಕಾಲಿಕ ಆಶ್ರಯ, ರಕ್ಷಣೆ ನೀಡುವುದರ ಜೊತೆಗೆ ಸ್ವಪ್ರೇರಣೆಯಿಂದ ತಮ್ಮ ಕಾಲಮೇಲೆ ತಾವು ನಿಲ್ಲಲು ಅನುಕೂಲವಾಗುವಂತೆ ತರಬೇತಿ ಪಡೆಯುವಂತೆ ಪ್ರೋತ್ಸಾಹಿಸಿ ಮಹಿಳೆಯರು ಸಮಾಜದಲ್ಲಿ ಇತರೆ ಮಹಿಳೆಯರಂತೆ ಧೈರ್ಯವಾಗಿ ಬದುಕುವಂತೆ ಸಶಕ್ತರಾಗಿ ಮಾಡುವುದೇ ಸಾಂತ್ವ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಿ.ಎ.ವಂಟಮೂರಿ ಅವರುಮಾತನಾಡಿ, ಈ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅನುದಾನ ಪಡೆದ ಸ್ವಯಂ ಸೇವಾ ಸಂಸ್ಥೆಗಳ ಮುಖಾಂತರ ನಡೆಸಲಾಗುವುದು. ಪ್ರಸ್ತುತ ಜಿಲ್ಲೆಯಲ್ಲಿ ಏಳು ತಾಲೂಕುಗಳಲ್ಲಿ ಈ ಸಾಂತ್ವನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಯಾವುದೇ ದೌರ್ಜನ್ಯಕ್ಕೊಳಗಾದ ಮಹಿಳೆಯರು ತಮ್ಮ ಸಮೀಪದ ಸ್ವಯಂ ಸೇವಾ ಸಂಸ್ಥೆಗಳನ್ನು ಸಂಪರ್ಕಿಸಿ ಸಹಾಯ ಪಡೆಯಬಹುದೆಂದು ಅವರು ಹೇಳಿದರು.
ಸಾಂತ್ವನ ಕೇಂದ್ರಗಳು: ಹಾವೇರಿ: ಶಕ್ತಿ ಅಸೋಸಿಯೇಶನ್, ಶಶಿಕುಮಾರ- ದೂರವಾಣಿ ಸಂಖ್ಯೆ:08375-236401.
ಬಂಕಾಪೂರ: ಇಡಾರಿ ಸಂಸ್ಥೆ, ಶ್ರೀಮತಿ ಪರಿಮಳಾ ಜೈನ್- ದೂರವಾಣಿ ಸಂಖ್ಯೆ:08378-217381.
ಹಿರೇಕೆರೂರು: ಸ್ಫೂರ್ತಿ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಸಂತೋಷ ಸುರ್ವೆ- ದೂರವಾಣಿ ಸಂಖ್ಯೆ:08376-219600.
ರಾಣೇಬೆನ್ನೂರು ಸಹಾರ ಸಂಸ್ಥೆ, ಡಾ.ಗಣೇಶ ಕುಲಕರ್ಣಿ- ದೂರವಾಣಿ ಸಂಖ್ಯೆ:0837-260004.
ಬ್ಯಾಡಗಿ: ಬಸವೇಶ್ವರ ವಿದ್ಯಾಸಂಸ್ಥೆ-ದೂರವಾಣಿ ಸಂಖ್ಯೆ:08375-226272. ಸವಣೂರು:ಸ್ಪಂದನಾ ಅಸೋಸಿಯೇಶನ್- ದೂರವಾಣಿ ಸಂಖ್ಯೆ:08378-241091. ಹಾನಗಲ್ಲ: ಅರುಣೋದಯ ವಿದ್ಯಾವರ್ಧಕ ಸಂಸ್ಥೆ- ಮೊ:948355671.
No comments:
Post a Comment